97 Sarvajnana Vachanagalu – ಸರ್ವಜ್ಞ ತ್ರಿಪದಿಗಳು
ಸರ್ವಜ್ಞ 16ನೇ ಶತಮಾನದಲ್ಲಿ ಕನ್ನಡದ ಹೆಸರಾಂತ ಕವಿಯಾಗಿದ್ದರು, ತ್ರಿಪದಿ ರಚಿಸುವಲ್ಲಿ ಪ್ರಸಿದ್ಧ ಕವಿಯಾಗಿದ್ದರು ಕೇವಲ ಮೂರು ಸಾಲಿನ sarvajnana vachanagalu ರಚಿಸಿ ಹೆಸರುವಾಸಿಯಾಗಿದ್ದರು, ಕನ್ನಡದ ಹೆಸರಾಂತ ಕವಿಗಳ ಪಟ್ಟಿಯಲ್ಲಿ ಈ ಕವಿ ಕೂಡ ಒಬ್ಬರು ಎಂದು ಹೇಳಬಹುದು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತನ್ನ ತ್ರಿಪದಿಗಳ ಮುಖಾಂತರ ಜನರಿಗೆ ಶಿಕ್ಷಣ ನೀಡುತ್ತಿದ್ದರು.
100 ಸರ್ವಜ್ಞ ತ್ರಿಪದಿಗಳು
ವಿದ್ಯೆ ಕಲಿಸದ ತಂದೆ । ಬುದ್ದಿ ಹೇಳದ ಗುರು ।
ಬಿದ್ದಿರಲು ಬಂದು ನೋಡದ ತಾಯಿಯು ।
ಶುದ್ಧ ವೈರಿಗಳು ಸರ್ವಜ್ಞ ।
ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ
ಹಸ್ತದಿಂದಧಿಕ ಹಿತರಿಲ್ಲ ಪರದೈವ
ನಿಂತ್ರನಿಂದಿಲ್ಲ ಸರ್ವಜ್ಞ.
ಮಾತೆಯಿಂ ಹಿತರಿಲ್ಲ, ಕೋತಿಯಂ ಮರುಳಿಲ್ಲ
ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ
ಜಾತನಿಂದಿಲ್ಲ ಸರ್ವಜ್ಞ.
ನಾಲಿಗೆಗೆ ನುಣಿಪಿಲ್ಲ ಹಾಲಿಗಿಂ ಬಿಳುಪಿಲ್ಲ
ಕಾಲದಿಂದದಧಿಕ ಅರಿವಿಲ್ಲ ದೈವವುಂ
ಶೂಲಿಯಿಂದಿಲ್ಲ ಸರ್ವಜ್ಞ.
ಅಂಬಳೂರೊಳಗೆಸೆವ , ಕುಂಬಾರಸಾಲೆಯಲಿ
ಇಂಬಿನ [ಕಳೆಯ ] ಮಳಿಯೊಳು -ಬಸವರಾಸ
ನಿಂಬಿಟ್ಟನೆನ್ನ ಸರ್ವಜ್ಞ.
ಹೆತ್ತವಳು ಮಾಳಿ ಎನ್ನ, ನೊತ್ತಿ ತೆಗೆದವಳು ಕೇಶಿ
ಕತ್ತು ಬೆನ್ನ ಹಿಡಿದವಳು ಕಾಳಿ -ಮೊಯಿದಿಲ್ಲೆನ್ನ
ಬತ್ತಲಿರಿಸಿದಳು ಸರ್ವಜ್ಞ.
ಹೊಲೆಯಿಲ್ಲ ಅರಿದಂಗೆ, ಬಲವಿಲ್ಲ ಬಡವಂಗೆ
ತೊಲೆ ಕಂಬವಿಲ್ಲ , ಗಗನಕ್ಕೆ ಯೋಗಿಗೆ ಕುಲವೆಂಬುದಿಲ್ಲ
ಸರ್ವಜ್ಞ.
ಕಾಡೆಲ್ಲಾ ಕಸುಗಾಯಿ , ನಾವೆಲ್ಲ ಹೆಗ್ಗಿಡವು
ಆಡಿದ ಮಾತು ನಿಜವಿಲ್ಲ ಮಲೆನಾಡು ಕಾಡು
ಸಾಕೆಂದ ಸರ್ವಜ್ಞ.
ಹಮ್ಮು ಎಂಬುದು ಕಿಚ್ಚು ಒಮ್ಮೆಲೇ
ನಂದುವುದೇ ? ಬೊಮ್ಮು ಹರಿ ಬೆಂದು
ಜಗಬೆಂದು ದಾಕಿಚ್ಚ ಗಮ್ಮಿಹನೆ ಯೋಗಿ ಸರ್ವಜ್ಞ.
ಹಸಿವ ಕೊಂದಾತಂಗೆ , ಪಶುವಧೆಯ
ಮಾಡದವಗೆ ಹುಸಿ ಕರ್ಮ
ಕಾಮವಳಿಂದಾಗೇ ಇಹಪರಿದಿ ಶಶಿಧರನೊಲಿವ ಸರ್ವಜ್ಞ.
ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳೊಂದೊಂದು ನುಡಿಗಲಿತು
ವಿದ್ಯೆಯ ಪರ್ವತವೇ ಆದ ಸರ್ವಜ್ಞ.
ಸಾಲವನು ಕೊಂಬಾಗ ಹಾಲೊಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ ಕೀಳು ಮುರಿದಂತೆ ಸರ್ವಜ್ಞ.
ಒಳಗಣ ಜ್ಯೋತಿಯ ಬೆಳಗ ಬಲ್ಲಾತಂಗೆ
ಬೆಳಗಾಯಿತೇಳಿ ಕೇಳಿ ಎಂತೆಂಬ ನುಡಿಯ
ಕಳವಳವೇಕೆ ಸರ್ವಜ್ಞ.
ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕೆ
ಸಂದ ಜ್ಞಾನಿಗಳ ಒಡನಾಡೆ ಪರಬೊಮ್ಮ
ಮುಂದೆ ಬಂದಕ್ಕೂ ಸರ್ವಜ್ಞ.
ತನ್ನ ತನ್ನತಾನರಿದವನ ಮುನ್ನ ಹೊದ್ದದ್ದು ಮಾಯೆ
ಉನ್ನತ ಮಪ್ಪ ಗಜವೇರಿ ಒಪ್ಪವನು
ಕುನ್ನಿಗಂಜುವನೆ ಸರ್ವಜ್ಞ.
ಭಕ್ತಿ ಎಂಬುದು ಬೀಜ ಮುಕ್ತಿ ಎಂಬುದೇ ಫಲವು
ಯುಕ್ತಿಯು೦ ವೃಕ್ಷ ವೇರಿದಗೆ ಇಹದಲ್ಲಿ
ಮುಕ್ತಿ ಇಹುದೆಂದ ಸರ್ವಜ್ಞ.
Sarvajnana Vachanagalu
ಕೇವಲ ಮೂರು ಸಾಲಿನ ವಚನಗಳನ್ನ ಒಳಗೊಂಡಿದ್ದ ಕವಿತೆಗಳನ್ನ ತ್ರಿಪದಿ ಎಂದು ಕರೆಯುತ್ತಾರೆ ಸರ್ವಜ್ಞ ತ್ರಿಪದಿಗಳು ಬರೆದು ಹೆಸರುವಾಸಿಯಾಗಿದ್ದ ನಮ್ಮ ಕರ್ನಾಟಕದ ಹೆಸರಾಂತ ಕವಿ, ಈ ಕೆಳಗೆ ಸರ್ವಜ್ಞನ ಹಲವು ಹೆಸರಾಂತ ಕವಿತೆಗಳನ್ನ ನೀಡಿದ್ದೇವೆ.
ದಾನಭಕ್ತಿಗಳಲ್ಲಿ ನಾನು ಮರೆದಿರಬೇಕು
ನಾನೆಂಬ ರೋಗ ನೀಗಿದಾಗೆ, ಗುರುಬೋಡೆ
ತಾನೇ ಫಲಿಸುವದು ಸರ್ವಜ್ಞ.
ಕಂಡುದನು ಆಡೇ ಭೂ । ಮಂಡಲವು ಮುನಿಯುವುದು
ಕೊಂಡಾಡುತಿಚ್ಛೇ ನುಡಿದಿಹರೆ , ಜಗವೆಲ್ಲ ।
ಮುಂಡಾಡುತಿಹುದು ಸರ್ವಜ್ಞ.
ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣುವನು ಹೊತ್ತು ತಾ
ನಿತ್ಯದಲಿ ಸುತ್ತಿಬಂದಂತೆ ಸರ್ವಜ್ಞ.
ಊರಿಂಗೆ ದಾರಿಯನು । ಆರು ತೋರಿದಡೇನು ।
ಸಾರಯದ ನಿಜವಾ ತೋರುವ, ಗುರುವು ತಾ ।
ನರಾದಡೇನು ಸರ್ವಜ್ಞ ।।
ಹಮ್ಮು ಎಂಬುವ ಕಿಚ್ಚು ಒಮ್ಮೆಲೇ
ನಂದುವುದೇ ?ನಂಬೊಮ್ಮ ಹರಿ ಬೆಂದು ಜಗಬೆಂದು
ದಾಕಿಚ್ಚ ಗುಮ್ಮಿಹನೆ ಯೋಗಿ ಸರ್ವಜ್ಞ.
ಮಾಳನೂ ಮಾಳಿಯೂ । ಕುಳ್ತಿ೦ದ ಹೆಮ್ಮೆಯಲಿ ।
ಕೇಳೇ ನಿನಾರ ಮಗನೆಂದು -ನಾ ಶಿವನ
ಮೇಳದನುಗೆಂಬೆ ಸರ್ವಜ್ಞ.
ಪುರುಷ ಕಬ್ಬಿನದೆಸೆವ ,ಕರಡಿಯೊಳಗಡಗಿಹುದೆ ?
ಹರಿಭಕ್ತಿ ಉಳ್ಳ ಮಹಿಮ , ಸಂಸಾರದೊಳು
ಚಿರಕಾಲವಿಹವೇ ? ಸರ್ವಜ್ಞ.
ಕೂಳು ಹೋಗುವ ತನಕ ಗುಳಿಯಂತಿರುತಿಕ್ಕು
ಕೂಳು ಹೋಗದಾ ಮೂಡಿ ಬರಲು
ಮನುಜನವ ಮುಳನಾಯಕ್ಕೂ ಸರ್ವಜ್ಞ.
ಜಾಳಿಗೆಯೂ ಕಟ್ಟುವುದು । ಕಾಳಗಕೆ ನಡೆವುದು
ಸೂಳೇರ ಸುಖವ ಮಾಡುವುದು
ಕೂಳಿನ ಗುಣವು ಸರ್ವಜ್ಞ.
ಮುನ್ನ ಪೂರ್ವದಲಾನು । ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು -ಎಂದು
ಮನ್ನಿಪರು ನೋಡ ಸರ್ವಜ್ಞ.
ನಿದ್ರೆಯಿಂ ಸುಖವಿಲ್ಲ ಪದ್ಯದಿಂ ಅರಿವಿಲ್ಲ
ಮುದ್ರೆಯಿಂದದಧಿಕ ಮಾತಿಲ್ಲ ದೈವವುಂ
ರುದ್ರನಿಂದಿಲ್ಲ ಸರ್ವಜ್ಞ.
ಇದ್ದಲ್ಲಿಂ ಕರಿದಿಲ್ಲ ಬುದ್ಧಿಯಿಂ ಹಿರಿದಿಲ್ಲ
ವಿದ್ಯೆಯಿಂದಧಿಕ ಧನವಿಲ್ಲ ದೈವ ತಾ
ರುದ್ರನಿಂದಿಲ್ಲ ಸರ್ವಜ್ಞ.
Sarvajnana Vachanagalu
ಇತ್ತೀಚಿನ ಮಕ್ಕಳಲ್ಲಿ ಕವಿತೆ ಸಾಹಿತ್ಯ ಓದುಗರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ ಇದಕ್ಕೆ ಮುಖ್ಯ ಕಾರಣ ಶಾಲಾ-ಕಾಲೇಜುಗಳಲ್ಲಿ ನಮ್ಮ ಪರಂಪರೆ ಇತಿಹಾಸದ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುತ್ತಾ ಬಂದಿಲ್ಲ ಈ ಕಾರಣಕ್ಕಾಗಿಯೇ ಮಕ್ಕಳಲ್ಲಿ ಸಾಹಿತ್ಯದ ಕೊರತೆ ಸಹ ಉಂಟಾಗಿದೆ, 20 ವರ್ಷಗಳ ಹಿಂದೆ ಆನ್ಲೈನ್ ಮಾಧ್ಯಮ ಇರಲಿಲ್ಲ ಈ ಕಾರಣಕ್ಕಾಗಿಯೇ ಎಲ್ಲರೂ ಪುಸ್ತಕಗಳನ್ನ ಬಿಡುವಿನ ವೇಳೆಯಲ್ಲಿ ಓದಿ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಯಾರಿಗೂ ಸಹ ಸಮಯ ಇಲ್ಲ ಈ ಕಾರಣಕ್ಕಾಗಿಯೇ ಹೆಸರಾಂತ ಕನ್ನಡ ಕವಿಗಳಾದ ರನ್ನ,ಪಂಪ,ಸರ್ವಜ್ಞ ಮುಂತಾದ ಕವಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಯಾವುದೇ ಮಾಹಿತಿ ಇಲ್ಲ ಇವರ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಅವರು ಯಾರೆಂದು ತಿಳಿದಿರುವುದಿಲ್ಲ ಈ ಕಾರಣಕ್ಕಾಗಿಯೇ ಇಲ್ಲಿ ಸರ್ವಜ್ಞ ಬರೆದಿರುವ ಹಲವು ಕವಿತೆಗಳನ್ನ ನಿಮಗಾಗಿ ನೀಡಿದ್ದೇವೆ ಇವುಗಳನ್ನ ಓದುವುದರ ಜೊತೆಗೆ ಅರ್ಥೈಸಿಕೊಂಡು ಆದಷ್ಟು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ನಾವು ನೀಡಿಲ್ಲದ ಯಾವುದಾದರೂ Sarvajnana Vachanagalu ಇದ್ದರೆ ಖಂಡಿತ ನಮಗೆ ಶೇರ್ ಮಾಡಿ.
ಹರಿಬ್ರಹ್ಮರೆಂಬುವರು ಹರನಿಂದಲಾದವರು
ಅರಸನಿಗೆ ಆಳು ಸರಿಯಿಹನೇ ಪಶುಪತಿಗೆ
ಸರಿಯರು ಕಾಣೆ ಸರ್ವಜ್ಞ.
ಬಿಂದುವ ಬಿಟ್ಟು ಹೊ । ದಂದು ಬಸುರಾದವಳ
ಲಂದಡಿಯಷ್ಟಾದಶ ಮಾಸ – ಉದರದಲ್ಲಿ
ನಿಂದು ನ ಬೆಳೆದೆ ಸರ್ವಜ್ಞ.
ಕೊಟ್ಟು ಹುಟ್ಟಲಿಲ್ಲ ,ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲ್ಲಿ ಶಿವನ ಬೈದರೆ , ಶಿವ ತಾನು ರೊಟ್ಟಿ ,
ಕೊಡುವೆನೆ ಸರ್ವಜ್ಞ.
ಇಂದುವಿನೊಲುರಿಯುಂಟೆ ? ಸಿಂಧುವಿನೊಳಾರಬಂಟೆ ?
ಸುಂದ ವೀರನೊಳು ಭಯ ಉಂಟೇ ? ಭಕ್ತಿಗೆ
ಸಂದೇಹ ಉಂಟೆ ? ಸರ್ವಜ್ಞ.
ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ ವಿಜಾತಿ ಎನಬೇಡ ದೇವನೊಲಿ
ದಾತದೆ ಜಾತಾ. ಸರ್ವಜ್ಞ.
ಕೋತಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ
ಮೇಲು ಮೇಟಿಯಿಂದ ರಾಟಿ ನಡೆದುದಲ್ಲದೆ
ದೇಶ ದಾಟವೇ ಕೆಡಗು ಸರ್ವಜ್ಞ.
ಎಂಜಲವು ಶಾಚವು ,ಸಂಜೆ ಎಂದೆನಬೇಡ
ಕುಂಜರವು ವನವನೆನೆವಂತೆ ಬಿಡದೇನಿ
ರಂಜನನ ನೆನೆಯೂ -ಸರ್ವಜ್ಞ.
ಕಲ್ಲುಕಲ್ಲೆಂಬುವಿರಿ, ಕಲ್ಲೋಳಿಪ್ಪುವುದೇ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ ,ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ.
ಜ್ಞಾನ ಉಳ್ಳವನೋಡಾಲು ಭಾನುವಿನಂತಿಹುದು
ಜ್ಞಾನವಿಲ್ಲದವನ ಬರಿಯೊಡಲು ಹಾಳೂರ
ಶುನಕನಂತಕ್ಕೂ ಸರ್ವಜ್ಞ.
ಕಂಡವರ ದಂಡಿಸುತ ,ಕೊಂದವರ ವಡವೆಗಳ
ನುಂಡುಂಡು ಮಲಗಿ ಮಡಿದ ಮೇಲುವೆಗೆ
ಯಮದಂಡ ತಪ್ಪುವದೇ ಸರ್ವಜ್ಞ.
ಏನಾದಡೇನಯ್ಯಾ ತಾನಾಗದನ್ನಕ್ಕೂ
ತಾನಾಗಿ ತನ್ನನಿರಿದೊಡೆ ಲೋಕ ತಾ
ನೇನಾದೊಡೇನು ಸರ್ವಜ್ಞ.
ಅರಿಯನೆಂಬುವಗೊಂದು ಕುರುಹುಂಟು ಬೊಮ್ಮನ
ನರಿದೆ ನೆಂಬುವಗೊಂದು ಅರಿವ ತಾನರಿದೊಡೆ
ತೆರೆಹಿಲ್ಲ ಬೊಮ್ಮ ಸರ್ವಜ್ಞ.
ಮನದಲ್ಲಿ ನೆನೆವಂಗೆ ಮನೆಯೇನು ? ಮಠವೇನೂ ?
ಮನದಲ್ಲಿ ನೆನೆಯದಿರುವವನು ದೇಗುಲದ ಕೊನೆಯಲ್ಲಿದ್ದೆನು
ಸರ್ವಜ್ಞ.
ಇಂಜಿನೊಳು ನಾಟವನು, ತೆಂಗಿನೊಳಗಳನೀರು
ಭೃಂಗ ಕೋಗಿಲೆಯ ಕಂಠದೊಳು ,ಗಾಯನವ
ತುಂಬಿದವರಾರು ಸರ್ವಜ್ಞ.
ಎಲ್ಲ ಬಲ್ಲವರಿಲ್ಲ ,ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು
ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ.
`
ಏಳು ಕೋಟಿಯೇ ಕೋಟಿ , ಏಳು ಲಕ್ಷವೇ ಲಕ್ಷ
ಏಳು ಸಾವಿರ ಎಪ್ಪತ್ತು ವಚನಗಳ
ಹೇಳಿದನು ಕೆಳ ಸರ್ವಜ್ಞ.
ಸತ್ಯವೆಂಬುದು ತಾನು| ಹಿತ್ತಲದ ಗಿಡ ನೋಡ
ಮತ್ತೆಲ್ಲಿ ನೋಡಿ ಅರಸದಲೇ ತಾನಿರ್ದ
ಹತ್ತಿಲೆ ನೋಡ ಸರ್ವಜ್ಞ.
ತಂದೆ ಹಾರುವನಲ್ಲ । ತಾಯಿ ಮಾಳಿಯೂ ಅಲ್ಲ ।
ಚಂದ್ರಶೇಖರನ ವರದಿಂದ ಪುಟ್ಟಿದ
ಕಂದ ತಾನೆಂದು ಸರ್ವಜ್ಞ.
ಬಂಧುಗಳು ಆದವರು , ಬ೦ದುಂಡು ಹೋಗುವರು
ಬಂಧವನ ಕಳೆಯಲರಿಯರು , ಗುರುವಿಂದ
ಬಂಧುಗಳು ಉಂಟೆ ? ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ.
ಪುರುಷಲೋಹವ ಸೋಂಕಿ , ವರುಷವಿರಬಲ್ಲುದೆ ?
ಪುರುಷವೆಂತಂತೆ ಶಿಷ್ಯಂಗೆ ಗುರುವಿನ
ದರುಶನವೇ ಪುರುಷ ಸರ್ವಜ್ಞ.
ಮುದ್ದೆಗಳು ಇಲ್ಲದೆ । ನಿದ್ರೆಗಳು ಬಾರವು
ಮುದ್ದು ಮಾತುಗಳು ಸೊಗಸವು -ಒಡಲಿಗೆ
ಮುದ್ದೆ ತಪ್ಪಿದರೆ ಸರ್ವಜ್ಞ.
ಸರ್ವಜ್ಞ ತ್ರಿಪದಿಗಳು
ಇತ್ತೀಚಿನ ಮಕ್ಕಳಲ್ಲಿ ನಮ್ಮ ಕನ್ನಡತನದ ಬಗ್ಗೆ ಅದರ ಉಳಿಯುವಿಕೆ ಬಗ್ಗೆ ಗಮನ ಇಲ್ಲ ಹಾಗಾಗಿಯೇ ಬೇರೆ ಭಾಷೆಯ ವ್ಯಾಮೋಹಕ್ಕೆ ಬಿದ್ದಿದ್ದಾರೆ ಬಹಳ ವರ್ಷಗಳಿಂದ ಬಂದ ಶ್ರೀಕರ ಕೊಡುಗೆಯನ್ನ ಮರೆತು ಬೇರೆ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ ಹಾಗಾಗಿ ನಮ್ಮ ಹೆಸರಾಂತ ಹಳೆ ಕವಿಗಳ ಬಗ್ಗೆ ಕೂಡ ಮಾಹಿತಿ ಅವರಿಗೆ ಇಲ್ಲದಿರುವ ಕಾರಣ ಸಾಹಿತ್ಯ ಕವಿತೆ ಮುಂತಾದವುಗಳನ್ನ ಓದುವುದು ನಿಲ್ಲಿಸಿದ್ದಾರೆ ಹಾಗಾಗಿ ಸರ್ವಜ್ಞ ಎಂಬ ಕವಿ ಒಬ್ಬ ಇದ್ದ ಎನ್ನುವ ಅಂಶವೇ ಅನೇಕ ಜನರಿಗೆ ತಿಳಿದಿಲ್ಲ ಈ ಕಾರಣಕ್ಕಾಗಿ ನಮ್ಮ ಸಂಪ್ರದಾಯಗಳು ಮರೆಯಾಗುತ್ತಿದೆ ತಾವು ಆದಷ್ಟು ತಮ್ಮ ಮಕ್ಕಳಿಗೆ ಪೂರ್ವಜರು ಹೇಗೆ ಜೀವನ ನಡೆಸುತ್ತಿದ್ದರು ಎಂಬುದರ ಮಾಹಿತಿ ನೀಡಿದರೆ ತುಂಬಾ ಉಪಯೋಗವಾಗುತ್ತೆ ನಮ್ಮ ಕವಿಗಳು ರಚಿಸಿರುವ ಸಾಹಿತ್ಯವನ್ನು ಬಿಡುವಿನ ವೇಳೆಯಲ್ಲಿ ನಿಮ್ಮ ಮಕ್ಕಳಿಗೆ ಓದಿ ಹೇಳಿ. ಜ್ಞಾನ ಬೆಳೆಸಿಕೊಳ್ಳಲು ಗಾದೆ ಹಾಗೂ ಸರ್ವಜ್ಞ ತ್ರಿಪದಿಗಳು ತುಂಬಾ ಉಪಯೋಗವಾಗುತ್ತೆ ದೊಡ್ಡ ಪುಸ್ತಕ ಓದುವ ಬದಲು ಸಣ್ಣಪುಟ್ಟ ಗಾದೆಗಳನ್ನ ಓದಿ ತಮ್ಮ ಕಷ್ಟಕಾಲದಲ್ಲಿ ಖಂಡಿತ ಇವೆಲ್ಲ ನೆರವಾಗಲಿದೆ.