Basavannanavara Vachanagalu in Kannada

ವಚನಗಾರರಲ್ಲಿ ಅತ್ಯಂತ ಪ್ರಮುಖವಾದವರು ನಮ್ಮ ಬಸವಣ್ಣ, ಲೋಕದ ಡೊಂಕನ್ನ ತಿದ್ದುವ ಸಲುವಾಗಿ ಬಸವಣ್ಣನವರು ಹಲವು ವಚನಗಳನ್ನ ರಚಿಸಿದರು.ಹಿಂದೆ ಸಮಾಜದಲ್ಲಿ ಅನೇಕ ದುಷ್ಟ ಪದ್ಧತಿಗಳು ನಡೆಯುತ್ತಿದ್ದವು ಅಂತಹ ಪದ್ಧತಿಗಳನ್ನು ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮದೇ ಶೈಲಿಯಲ್ಲಿ ಬಸವಣ್ಣ ವಚನಗಳು ರಚಿಸಿದ್ದಾರೆ.

ಬಸವಣ್ಣನವರ ಕೆಲವು ಪ್ರಮುಖ ವಚನಗಳು ಈ ಕೆಳಕಂಡಂತಿವೆ
ಕಳಬೇಡ ಕೊಲಬೇಡ
ಹುಸಿಯಾನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಯ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದ್ದೀರಾ ಹಳಿಯಲು ಬೇಡ
ಇದೆ ಅಂತರಂಗ ಶುದ್ದಿ
ಇದೆ ಬಹಿರಂಗ ಶುದ್ದಿ
ಇದೆ ನಮ್ಮ
ಕೂಡಲಸಂಗಮದೇವನೊಲಿಸುವ ಪರಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ ?
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿಗಿಲ್ಲ.

ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿಡದೆ ಕಿವಿ ಮೂಗು ಕೊಯ್ಯುವನು
ಹಲವು ದೈವದ ಎಂಜಲ ತಿಂಬವನೆಂಬೆ
ಕೂಡಲಸಂಗಮದೇವ.

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು !
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

ಜ್ಯಾನದ ಬಲದಿಂದ ಅಜ್ಯಾನದ ಕೇಡು
ಜ್ಯೋತಿಯ ಬಲದಿಂದ ತಮಂಧದ ಕೇಡು
ಸತ್ಯದ ಬಲದಿಂದ ಅಸತ್ಯದ ಕೇಡು
ಪುರುಷದ ಬಲದಿಂದ ಅವಲೋಹದ ಕೇಡು
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.

ಹಾವು ತಿಂದವರು ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿ ಗರ ಹೊಡೆದವರ ನುಡಿಸಲು
ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ
ಕೂಡಲಸಂಗಮದೇವ .

ಅಭ್ಯಾಸವೆನ್ನ ವರ್ತಿಸಿತ್ತಯ್ಯ, ಭಕ್ತಿ
ಸಾಧ್ಯವಾಗದು , ನಾನೇವೆನಯ್ಯ
ಅನು ನಿಮ್ಮ ಮನ೦ಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ
ಶರಣೆಂಬೆ ಕೂಡಲಸಂಗಮದೇವಾ .

ಕಂಗಳ ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ಪೂಜಿಸಲಿಲ್ಲ
ಮಹಾಂತ ಕೂಡಲಸಂಗಮದೇವ .
ವಿಷಯವೆಂಬ ಹಸುರನೆನ್ನ ಮುಂದೆ
ತಂದು
ಪಸರಿಸಿದೆಯಯ್ಯ
ಪಶುವೇನ ಬಲ್ಲದು
ಹಸುರೆಂದೆಳಸುವುದು

ವಿಷಯ ರಹಿತನ ಮಾಡಿ ಭಕ್ತಿರಸವ
ದನಿಯ ಮೇಯಿಸಿ
ಸುಬುದ್ಧಿಯೆಂಬುದಕವನ್ನೆರದು ನೋಡಿ
ಸಲಹಯ್ಯ
ಕೂಡಲಸಂಗಮದೇವ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
ನೀ ಹುಟ್ಟಿಸಿದಲ್ಲಿ ಹುಟ್ಟಿ , ನೀ ಕೊಂದಲ್ಲಿ
ಸಾಯದೆ
ನೀನಿರಿದಲ್ಲಿ ಇರದೇ ಎನ್ನವಶವೇ ಅಯ್ಯಾ.
ಅಕಟಕಟಾ ಎನ್ನವನೆನ್ನವನೆನ್ನಯ್ಯ
ಕೂಡಲಸಂಗಮದೇವಯ್ಯ

ಬಸವಣ್ಣ ವಚನಗಳು Small Basavanna Vachanagalu in Kannada
ಬಹಳ ಹಿಂದೆ 11ನೇ ಶತಮಾನದಲ್ಲಿ ಬಸವಣ್ಣನವರು ಈಗಿನ ನಮ್ಮ ಸಂಸತ್ತಿಗೆ ಹೋಲಿಕೆ ಆಗುವ ಅನುಭವ ಮಂಟಪ ರಚಿಸಿದ್ದರು ಇದನ್ನ ಮಾದರಿಯಾಗಿತ್ತುಕೊಂಡ ಬಿಜೆಪಿ ಸರ್ಕಾರ ನಮ್ಮ ಈಗಿನ ಸಂಸತ್ತನ್ನ ರಚಿಸಿದೆ ಹಾಗೂ ಬಸವಣ್ಣನವರ ಮೂರ್ತಿ ಸಹ ಪ್ರತಿಷ್ಠಾಪನ ಮಾಡಿದ್ದಾರೆ. ತಮ್ಮ ವಿಶೇಷ ವಚನ ಕಾವ್ಯಗಳ ಮುಖಾಂತರ ಬಸವಣ್ಣನವರು ಸಮಾಜದಲ್ಲಿ ಇದ್ದ ಪಿಡುಗುಗಳನ್ನ ಹೋಗಲಾಡಿಸುವ ಉದ್ದೇಶದಿಂದ ತನ್ನದೇ ಪ್ರೀತಿಯಲ್ಲಿ ಹಲವು ವಚನಗಳನ್ನು ರಚಿಸಿದ್ದಾರೆ.

ದಯವಿಲ್ಲದ ಧರ್ಮವಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ!!

ಇವನಾರವ ಇವನಾರವ
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ, ಇವ ನಮ್ಮವ,
ಇವ ನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ
ನಿಮ್ಮ ಮನೆಯ ಮಗನೆಂದೆನಿಸಯ್ಯ.

ಹೊಲೆಯ ಹೊಲೆಯರ ಮನೆಯ ಹೊಕ್ಕು,
ಸೇಲೆ ಕೈಕೂಲಿಯ ಮಾಡಿಯಾದರೆಯೂ
ನಿಮ್ಮ ನಿಲವಿಂಗೆ ಕುದಿವೇನಲ್ಲದೆ,
ಎನ್ನೊಡಲವಸರಕ್ಕೆ ಕುಡಿದೆನಾದರೆ
ತಲೆದಂಡ! ಕೂಡಲಸಂಗಮದೇವಾ.

ಉದಯಾಸ್ತಮಾನವೆನ್ನ ಬೆಂದ ಬಸುರಿ೦ಗೆ ಕುದಿಯಲಲ್ಲದೆ ,
ನಿಮ್ಮ ನೆನೆಯಲು ತೆಳುಹಿಲ್ಲಯ್ಯಾ!
ಎಂತೋ ! ಲಿಂಗ ತಂದೆ, ಎಂತಯ್ಯಾ ? ಎನ್ನ ಪೂರ್ವಲಿಖಿತ !
ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ !
ನೀರುಕಣಿಸಾ, ಕೂಡಲಸಂಗಮದೇವಾ!

ಪಾಪಿಯ ಧನ ಪ್ರಾಯಾಶ್ಚಿತ್ತಕ್ಕಲ್ಲದೆ
ಸತ್ಪಾತ್ರಕ್ಕೆ ಸಲ್ಲದಯ್ಯ
ನಾಯಿಯ ಹಾಲು ನಾಯಿ ಮರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ
ಕೂಡಲಸಂಗಮದೇವಾ.

ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ ಎನ್ನ ಮನಃಸಾಕ್ಷಿ
ಕೂಡಲಸಂಗಮದೇವ ಏನಾಗಿದೆ ದಿವ್ಯ.

ಮಡಕೆಯ ಮಾಡುವಡೆ ಮಣ್ಣೇ ಮೊದಲು
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು
ಶಿವಪಥವನರಿವಡೆ ಗುರುಪದವೇ ಮೊದಲು
ಕೂಡಲಸಂಗಮದೇವನರಿವಡೆ
ಶರಣರ ಸಂಗವೇ ಮೊದಲು .

ಮರ್ತ್ಯಲೋಕವೆಂಬುದು ಕರ್ತಾರನ
ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೂ
ಸಲ್ಲುವರಯ್ಯಾ;
ಇಲ್ಲಿ ಸಲ್ಲದವರು ಅಲ್ಲಿಯೂ
ಸಲ್ಲರಯ್ಯ ,
ಕೂಡಲಸಂಗಮದೇವ .

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ
ಲಿಂಗದ ಮೇಲೆ ನಿಷ್ಟೆಯಿಲ್ಲದ ಭಕ್ತ
ಇದ್ದಡೇನೋ , ಶಿವ ಶಿವಾ ಹೋದಡೇನೋ ?
ಕೂಡಲಸಂಗಮದೇವನ ಉಡಾವ ಆವಿಂಗೆ ಉಣ್ಣವ ಕಾರುವ ಬಿಟ್ಟಂತೆ.

ಬಸವಣ್ಣ ವಚನಗಳು Basavannanavara Kannada Vachanagalu
11ನೇ ಶತಮಾನದ ಪ್ರಮುಖ ಕವಿಯಾಗಿದ್ದ ನಮ್ಮ ಬಸವಣ್ಣನವರು ಮಾದರಸ ತಂದೆ ಹಾಗೂ ಮಾದಲಾಂಬಿಕೆ ತಾಯಿಗೆ ಒಬ್ಬನೇ ಮಗನಾಗಿ ಜನಿಸಿದ್ದರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದ ಇವರು ಸಮಾಜದಲ್ಲಿ ನಡೆಯುತ್ತಿದ್ದ ದುಷ್ಟ ಚಟುವಟಿಕೆಗಳನ್ನ ಹೋಗಲಾಡಿಸುವ ದೃಷ್ಟಿಯಿಂದ ಲಿಂಗಾಯಿತ ಧರ್ಮ ಸ್ಥಾಪಿಸಿದರು ಹಲವು ಜನರನ್ನ ಈ ಧರ್ಮಕ್ಕೆ ಮತಾಂತರ ಮಾಡಿ ಲಿಂಗಾಯಿತ ಧರ್ಮದ ಸ್ಥಾಪಕ ಎಂದು ಹೆಸರುವಾಸಿಯಾಗಿದ್ದಾರೆ. 11ನೇ ಶತಮಾನದ ರಾಜನಾದ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿವೋ ಹಾಗೂ ಪ್ರಧಾನ ಕವಿಗಳಾಗಿ ನಮ್ಮ ಬಸವಣ್ಣನವರು ಕಾರ್ಯನಿರ್ವಹಿಸಿದ್ದಾರೆ. ನಮಗೆಲ್ಲಾ ಗೊತ್ತಿದೆ ಬಸವಣ್ಣನವರ ಅಂಕಿತನಾಮ ಕೂಡಲಸಂಗಮದೇವ. ಜನರಿಗೆ ತಿಳುವಳಿಕೆ ಬರಲೆಂದು ತನ್ನದೇ ಶೈಲಿಯಲ್ಲಿ ವಚನಗಳನ್ನ ರಚಿಸಿದ್ದರು ನಮ್ಮ ಆರ್ಟಿಕಲ್ ನಲ್ಲಿ ಪ್ರಮುಖ ಹಾಗೂ ಹೆಸರುವಾಸಿಯಾದ ಕೆಲವು ವಚನಗಳನ್ನ ಮಾತ್ರ ನೀಡಿದ್ದೇವೆ ನಿಮ್ಮ ಅನಿಸಿಕೆಗೆ ಇನ್ನಷ್ಟು ವಚನಗಳು ಪ್ರಮುಖವಾಗಿವೆ ಅನಿಸಿದರೆ ಈ ಕೆಳಗೆ ನೀಡಿರುವ ಕಮ್ಮೆಂಟಲ್ಲಿ ತಪ್ಪದೇ ತಿಳಿಸಿ.

ತಂದೆ ನೀನು ತಾಯಿ ನೀನು
ಬಂದು ನೀನು ಬಳಗ ನೀನು
ಎನಗೆ ನೀನಿಲ್ಲದೆ
ಮತ್ತಾರು ಇಲ್ಲವಯ್ಯಾ
ಕೂಡಲಸಂಗಮದೇವ.

ಅಂಜಿದರಾಗದು ಅಳುಕಿದರಾಗದು !
ವಜ್ರಪಂಜರದೊಳಗಿದ್ದರಾಗದು !
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ದೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪುದು ಕೂಡಲಸಂಗಮದೇವ.

ಓಡಲಾರದ ಮೃಗವು
ಸೊಣಗಂಗೆ ಮಾಂಸವ ಕೊಡುವಂತೆ ,

ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ ;
ಹಿರಿಯರು ನರಮಾಂಸವ ಭುಂಜಿಸುವರೇ?
ತಾನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ ,
ಮಾಡಿಸಿಕೊಳ್ಳಬೇಕು ಜಂಗಮ ,
ಕೂಡಲಸಂಗಮದೇವ.

ಭಕ್ತಿ ಇಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ
ಭಿಕ್ಷವನ್ನಿಕ್ಕಿದಡೆ ಎನ್ನ ಪತ್ರೆ ತುಂಬಿತ್ತು
ಕೂಡಲಸಂಗಮದೇವ.

ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ
ಒಬ್ಬನೇ ಕಾಣಿರೋ ಇಬ್ಬರೆಂಬುದು
ಹುಸಿನೋಡಾ
ಕೂಡಲಸಂಗಮದೇವನಲ್ಲದೆ
ಇಲ್ಲವೆಂದಿತು ವೇದ…
ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪಧಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ.

ಅಂಕ ಕಂಡ ಕೊಲಾಸೇ ಮತ್ತೆಕಯ್ಯಾ
ಲೆಂಕ ಕಂಡ , ಪ್ರಾಣದಾಸೆ ಮತ್ತೆಕಯ್ಯಾ
ಭಕ್ತ ಕಂದಾ, ತನುಮನಧನದಾಸೆ ಮತ್ತೆಕಯ್ಯಾ
ನಿಮ್ಮ ಅಂಕೆಗೆ ಝ೦ಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.

Small Basavanna vachanagalu in kannada

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ , ಕಾಣಿ ಭೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ !
ಆಚಾರವೇ ಸ್ವರ್ಗ , ಅನಾಚಾರವೇ ನರಕ-
ಕೂಡಲಸಂಗಮದೇವಾ, ನೀವೇ ಪ್ರಮಾಣು !

ಕೊಲುವನೇ ಮಾದಿಗ , ಹೊಲಸ ತಿಂಬವನೇ ಹೊಳೆಯ!
ಕುಲವೇನೋ, ಆವಂದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು.

ತುಪ್ಪದ ಸವಿಗೆ ಅಲಗ ನೆಕ್ಕುವ ಸೋಣಗದಂತೆನ್ನ
ಸಂಸಾರ ಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು,
ಕೂಡಲಸಂಗಮದೇವಾ, ನಿಮ್ಮ ಧರ್ಮ !

ತನ್ನಿಚ್ಛೆಯ ನುಡಿದರೆ ನಚ್ಚುವುದೀ ಮನವು,
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂದಲ ಸಂಗನ ಶರಣರ
ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ !

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯ;
ಹಸುವೇನ ಬಲ್ಲದು ? ಹಸುರೆಂದೆಳಸುವುದು.
ವಿಷಯರಹಿತನ ಮಾಡಿ ಭಕ್ತಿ ರಸವ ದನಿಯೇ ಮೇಯಿಸಿ ,
ಸುಬುದ್ಧಿಯೆಂಬುದಕವನೆರೆದು
ನೋಡಿ ಸಲಹಯ್ಯಾಳ, ಕೂಡಲಸಂಗಮದೇವಾ .

ನಾದಪ್ರಿಯ ಶಿವನೆಂಬರು -ನಾದ ಪ್ರಿಯ ಶಿವನಲ್ಲಯ್ಯಾ ;
ವೇದಪ್ರಿಯ ಶಿವನೆಂಬರು – ವೇದಪ್ರಿಯ ಶಿವನಲ್ಲಯ್ಯಾ ;
ನಾದವ ಮಡಿದ ರಾವಳಂಗೆ ಅರೆಆಯುಷ್ಯವಾಯಿತ್ತು !
ವೇದವನೋದಿದ ಬ್ರಾಹ್ಮಣ ಶಿರಾ ಹೋಯಿತ್ತು !
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲಾ;
ಭಕ್ತಿ ಪ್ರಿಯ ನಮ್ಮ ಕೂದಲ ಸಂಗಮದೇವ .

ನೆಚ್ಚಿದೆನೆಂದರೆ,ಮೆಚ್ಚಿದೆನೆಂದರೆ ,ಸೇಲ ಮಾರುವೋದೆನೆಂದರೆ ,
ತನುವನಲ್ಲಾಡಿಸಿ ನೋಡುವೆ ನೀನು ,
ಮನವಲ್ಲಾಡಿಸಿ ನೋಡುವೆ ನೀನು ,
ಧನವನಾಲ್ಲಾಡಿಸಿ ನೋಡುವೆ ನೀನು,
ಇದಕ್ಕೆಲ್ಲ ಅಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂದಲ ಸಂಗಮದೇವ !

ಪುಣ್ಯ ಪಾಪವೆಂಬುದು ತಮ್ಮಿಷ್ಟ ಕಂಡಿರೆ
‘ಅಯ್ಯಾ’ ಎಂದೆಡೆ ಸ್ವರ್ಗ, ‘ಎಲೆವೊ’ ಎಂದಡೆ ನರಕ!
‘ದೇವಾ,ಭಕ್ತ ಜಯಾ, ಜಿಯಾ’ ಎಂಬ ನುಡಿಯೊಳಗೆ
ಕೈಲಾಸವಿದ್ದುದ್ದೇ ಕೂಡಲಸಂಗಮದೇವಾ.

ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೊಂಬುದೊಂದು ಸಂತೆಯ ಮಂದಿ,ಕಂಡಯ್ಯಾ !
ನೆಚ್ಚಿ ಕೆಡಬೇಡ -ಸಿರಿಯೆಂಬುದ !
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿಂತೆಂಬರು ;
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು
ಎಂತಯ್ಯಾ , ಅವರ ಬಕ್ತರೆಂಬೆ ?
ಕೂಡಲಸಂಗಮದೇವಾ, ಕೇಳಯ್ಯಾ ,
ಹೊಲತಿ ಶುದ್ಧ ನೀರ ಮಿಂದಂತಾಯಿತಯ್ಯಾ !

ನಾಳೆ ಬಪ್ಪುದು ನಮಗಿಂದೇ ಬರಲಿ;
ಇಂದು ಬಪ್ಪುದು ನಮಗೀಗಲೇ ಬರಲಿ ;
ಇದಕಾರಂಜುವರು , ಇದಕಾರಳುಕುವರು ?
“ಜಾಸತ್ಯ ಮರಣಂ ಧ್ರುವಂ” ಎಂಬುದಾಗಿ ,
ನಮ್ಮ ಕೂಡಲ ಸಂಗಮದೇವರು ಬರೆದ ಬರೆಹವ ತಪ್ಪಿಸುವರೇ.
ಹರಿಬ್ರಹ್ಮಾದಿಗಳಿಗಾಲವಲ್ಲಾ !

ಅಂದಣವನೇರಿದ ಸೊಣಗನಂತೆ
ಕಂಡೊಡೆ ಬಿಡದು ಮುನ್ನಿನ ಸ್ವಭಾವವನ್ನು –
ಸುಡು ! ಸುಡು !! ಮನವಿದು ವಿಷಯಕ್ಕೆ ಹರಿವುದು ;
ಮೃಡ, ನಿಮ್ಮನನುದಿನ ನೆನೆಯಲೀಯದು .
ಎನ್ನೊಡೆಯ ಕೂದಲ ಸಂಗಮ ದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!

ಆಶೆಯಾಮಿಷವ ತಾಮಿಸ , ಹುಸಿ, ವಿಷಯ ,
ಕುಟಿಲ,ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ –
ಇವನೆನ್ನ ನಾಲಿಗೆಯ ಮೇಲಿಂದೆತ್ತ ತೆಗೆದು ಕಳೆಯಯ್ಯಾ.
ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲಿಯವು.
ಇದು ಕಾರಣ , ಇವೆಲ್ಲವ ಕಳೆದು
ಎನ್ನ ಪಂಚಾಯ್ವವರ ಭಕ್ತರ ಮಾಡು ,
ಕೂಡಲಸಂಗಮದೇವಾ .

ಕೆಸರಲ್ಲಿ ಬಿದ್ದ ಪಶುವಿನಂತಾನು
ದೆಸೆದೆಸೆಗೆ ಭಯ ಬಿಡುತ್ತಿದ್ದೆನಯ್ಯಾ
ಅಯ್ಯಾ! ಆರಯ್ವವರಿಲ್ಲ -ಅಕಟಕಟಾ !
ಪಶುವೆಂದೆನ್ನ ಕೂಡಲಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ .

‘ಅಯ್ಯಾ, ಅಯ್ಯಾ’ ಎಂದು ಕರೆಯುತಲಿದ್ದೆನೆ
‘ಅಯ್ಯಾ,ಅಯ್ಯಾ’ ಎಂದೋರಲುತ್ತಲಿದ್ದೇನೆ;
‘ಓ’ ಎನ್ನಲಾಗದೆ ಅಯ್ಯಾ ?
ಆಗಲು ನಿಮ್ಮುವ ಕರೆಯುತ್ತಲಿದ್ದೇನೆ ;
ಮೌನವೇ, ಕೂಡಲಸಂಗಮದೇವಾ?

ಏನು ಬಂದಿರಿ, ಹದುಳವಿದ್ದರೆ ? ಎಂದರೆ
ನಿಮ್ಮ ಮೈಸಿರಿ ಹಾಸಿ ಹೋಹುದೇ ?
ಕುಳ್ಳಿರೆಂದರೆ ನೆಲಕುಳಿಹೋಹುದೇ?
ಒಡನೆ ನುಡಿದರೆ ಶಿರಾ- ಹೊಟ್ಟೆಯೊಡೆಯುವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ ,
ಕೊಯ್ಯದೆ ಮಾನಬನೇ ಕೂಡಲಸಂಗಮದೇವನು

Leave a Reply

Your email address will not be published. Required fields are marked *