Akkamahadevi Vachanagalu in Kannada with Meaning
ಅಕ್ಕಮಹಾದೇವಿಯವರು 11ನೇ ಶತಮಾನದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದರೂ ಕರ್ನಾಟಕದ ಮೊದಲ ಕವಿಯಾಗಿ ಗುರುತಿಸಿಕೊಂಡಿದ್ದ ಈಕೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಸುಖವನ್ನ ತ್ಯಜಿಸಿ ಶಿವಶರಣೆ ಯಾಗಿದ್ದರು ಇವರ ಅಂಕಿತನಾಮ ಚನ್ನಮಲ್ಲಿಕಾರ್ಜುನ ಜೊತೆಗೆ ಹಲವು akkamahadevi vachanagalu kannada ಗಾದೆಯನ್ನು ಸಹ ಇವರು ರಚಿಸಿದ್ದಾರೆ ಅವುಗಳು ಈ ಕೆಳಗಿನಂತಿವೆ.
Akkamahadevi Vachanagalu Kannada
ನಮಗೆ ನಮ್ಮ ಲಿಂಗದ ಚಿಂತೆ,
ನಮಗೆ ನಮ್ಮ ಭಕ್ತರ ಚಿಂತೆ
ನಮಗೆ ನಮ್ಮ ಆದ್ಯತೆ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣಾ ?
ಅಕ್ಕ ಕೆಳಾ ,ನಾನೊಂದು ಕನಸ ಕಂಡೆ
ಅಕ್ಕಿ,ಅಡಕೆ,ಓಲೆ, ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬೆತ್ತಿ ಕೈವಿಡಿವೆನು
ಚನ್ನಮಲ್ಲಿಕಾರ್ಜುನ ಕಂಡು ಕಣ್ ತೆರೆದನು
ತನುಕರಗದವರಲ್ಲಿ ಮಜ್ಜಿನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗಳಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಜ್ಞಾನ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಅರಿವು ಕಣ್ಣೀರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು .
ಪರಿಣಾಮಿಗಳಲ್ಲದವರಲ್ಲಿ ಇರಲೊಲ್ಲೆಯಯ್ಯಾ
ಹೃದಯ ಕಮಲ ಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನಲ್ಲಿ ಏನುಂಟೆಂದು ಎನ್ನ ಕರಸ್ಥಲವನಿಳಿಗೊಂಡೇ
ಹೇಳಾ ಚೆನ್ನಮಲ್ಲಿಕಾರ್ಜುನ ,
ನಾಳೆ ಬರುವುದು
ನಮಗಿಂದೇ ಬರಲಿ
ಇಂದು ಬರುವುದು
ನಮಗೀಗಲೇ ಬರಲಿ !
ಆಗೀಗಲೆನ್ನದಿರು
ಚೆನ್ನಮಲ್ಲಿಕಾರ್ಜುನ.
ಲೋಕದ ಚೇಷ್ಟೆಗೆ ರವಿ ಬಿಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಒಡವೆರೆದೆ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ.
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ
ರೂಪಿದ್ದು ಫಲವೇನು ಬಾಣವಿಲ್ಲದನ್ನಕ್ಕ
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚನ್ನಮಲ್ಲಿಕಾರ್ಜುನ
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗ೦ಜಿದಡೆಂತಿಯ್ಯಾ ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ?
ಚೆನ್ನಮಲ್ಲಿಕಾರ್ಜುನದೇವಾ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸುತ್ತಿನಿಂದೆಗಳುಬಂದಡೇ
ಮನದಲ್ಲಿ ಕೋಪವ
ತಾಳದೆ ಸಮಾಧಾನಿಯಾಗಿರಬೇಕು.
ಅರಿದೆನೆಂದಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೇ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ
ಸೋತೆನು
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಕ್ಷಮೆ ದಯೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ
ಲೋಕವೇ ತಾನಾದ ಬಳಿಕ ಏಕಾಂತದ
ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನ.
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ
ಕಡೆಯಲಿದ್ದಾಡುವ ಹದ್ದು ಬಲ್ಲುದೇ ಅಯ್ಯಾ?
ನದಿಯ ಗುಂಪ ತಾವರೆ ಬಲ್ಲುದಲ್ಲದೆ
ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯಾ ?
ಪುಷ್ಪದ ಪರಿಮಳವ ತುಂಬಿಬಲ್ಲುದಲ್ಲದೆ
ಕಡೆಯಲಿದ್ದಾಡುವ ನೊರಜು ಬಲ್ಲುದೇ ಅಯ್ಯಾ?
ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ನಿಲವ
ನೀವೇ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣಸೊಳೆಗಳೆತ್ತ
ಬಲ್ಲವಯ್ಯಾ?
ಎನ್ನ ಕಾಯ ಮಣ್ಣು, ಜೀವ ಬಯಲು
ಯಾವುದು ಹಿಡಿವೆನಯ್ಯ ದೇವಾ ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ?
ಎನ್ನ ಮಾಯಾವನು ಮಣಿಸಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ.
ಅಕ್ಕಮಹಾದೇವಿ ವಚನಗಳು
ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ
ಕಾಡುವುದು
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು ಕಾಡುವುದು
ಲೋಕವೆಂಬ ಮಾಯೆಗೆ
ಶರಣಾಚಾರಿತ್ರ್ಯ ಮರುಳಾಗಿ
ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ
ಶರಣಂಗೆ ಮಾಯೆಯಿಲ್ಲಾ
ಮರಹಿಲ್ಲ ಅಭಿಮಾನವು ಇಲ್ಲ.
ಎನ್ನ ಮನವ ಮಾರುಗೊಂಡನವ್ವಾ
ಎನ್ನ ತನುವ ಸೂರೆಗೊಂಡನವ್ವಾ
ಎನ್ನ ಸುಖವನೊಪ್ಪು ಗೊಂಡನವ್ವಾ
ಎನ್ನ ಇರವನಿಂಬುಗೊಂಡನವ್ವಾ ಚೆನ್ನಮಲ್ಲಿಕಾರ್ಜುನ
ಒಲುಮೆಯವಳಾನು.
ಚಂದನದ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೇ ?
ತಂದು ಸುವರ್ಣದ ಕಡಿದೊರೆದೊಡೆ
ಬೆಂದು ಕಳಂಕ ಹಿಡಿದಿತ್ತೆ ?
ಸಂದು ಸಂದನು ಕಡಿದು ಕಬ್ಬನು
ತಂದು ಗುಣದಲ್ಲಿಕ್ಕೆರಿದಡೆ
ಬೆಂದು ಪಾಕಗೊಳೆ ಸಕ್ಕರೆಯಾಗಿ
ನೊಂದನೆಂದು ಸವಿಯ ಬಿಟ್ಟಿತ್ತೇ
ನ ಹಿಂದೆ ಮಡಿದ ಹಿನಂಗಳೆಲ್ಲದ ತಂದು
ಮುಂದಿಳುಹಲು ನಿಮಗೆ ಹಾನಿ ಎನ್ನತಂದೆ
ಚೆನ್ನಮಲ್ಲಿಕಾರ್ಜುನ ದೇವಯ್ಯ
ಕೊಂದೊಡೆ ಶರಣೆಂಬುದು ಮಾಣೆ .
ಹಸಿವಾದರೆ ಊರೊಳಗೆ
ಭಿಕ್ಷಾನ್ನನ್ಗಲುಂಟು
ತೃಷೆಯಾದರೆ ಕೆರೆ ಬಾವಿ
ಹಲಂಗಳು೦ಟು
ಶಯನಕ್ಕೆ ಹಾಲು ದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯಾ
ಆತ್ಮಸಂಗಾತಕ್ಕೆ ನೀನೆನಗುಂಟು.
ಬಿಟ್ಟೆನೆಂದರೂ ಬಿಡದಿ ಮಾಯೆ !
ಬಿಡದಿದ್ದರೆ ಬೆಂಬೆತ್ತಿತ್ತು ಮಾಯೆ !
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ !
ಸವಣಂಗೆ ಸವಾಣಿಯಾಯಿತ್ತು ಮಾಯೆ !
ಯತಿಯೆ ಪರಾಕಿಯಾಯಿತ್ತು ಮಾಯೆ !
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ ನಿಮ್ಮಾಣೆ.
Akkamahadevi Vachanagalu in Kannada with Meaning
ಅಕ್ಕಮಹಾದೇವಿಯವರು 11ನೇ ಶತಮಾನದಲ್ಲಿ ಸುಮತಿ ಹಾಗೂ ನಿರ್ಮಲ ಶೆಟ್ಟಿ ಅವರ ಮಗಳಾಗಿ ಶಿವಮೊಗ್ಗದ ಉಡುತಡಿಯಲ್ಲಿ ಜನಿಸಿದರು ಸಮಾಜದಲ್ಲಿ ಆಗುತ್ತಿದ್ದ ಮೂಢನಂಬಿಕೆಗಳನ್ನ ಹೋಗಿಸುವ ದೃಷ್ಟಿಯಿಂದ ತನ್ನ ವಚನದ ಮುಖಾಂತರ ಜನರಿಗೆ ತಾವು ಮಾಡುತ್ತಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿಕೊಂಡು ಹೇಗೆ ಸುಖ ಜೀವನ ನಡೆಸಬೇಕು ಎಂಬುದರ ಬಗ್ಗೆ ಹಲವು akkamahadevi vachanagalu in kannada with meaning ವಚನಗಳಲ್ಲಿ ತಿಳಿಸಿದ್ದಾರೆ ಶಿವನ ಭಕ್ತಿಯಾಗಿದ್ದ ಅಕ್ಕಮಹಾದೇವಿಯು ಜನರನ್ನು ಹೇಗೆ ಸೆಳೆದು ಅವರಿಗೆ ಜೀವನ ಪಾಠ ತಿಳಿಸಬೇಕು ಎಂಬುದರ ಅರಿವು ತುಂಬಾ ಚೆನ್ನಾಗಿತ್ತು ಹಾಗಾಗಿ ಕರ್ನಾಟಕದಲ್ಲಿ ಹಲವು ಪ್ರದೇಶಗಳನ್ನು ಸುತ್ತಿ ಈಕೆ ಜನರಿಗೆ ಸಮಾಜದ ಮೌಲ್ಯ ಹಾಗೂ ಜೀವನ ಹೇಗೆ ನಡೆಸಿದರೆ ಉತ್ತಮವಾಗಿರುತ್ತೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪ್ರತಿ ಊರಿಗೂ ತೆರಳಿ ಬೋಧಿಸುತ್ತಿದ್ದರು ಹೀಗಾಗಿಯೇ ಇವರನ್ನ ಅಲ್ಲಿನ ಜನರು ದೇವರ ಸ್ವರೂಪ ಎಂದು ನಂಬಿ ಪೂಜಿಸುತ್ತಿದ್ದರು.
ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನ
ನೀನರಿವಾಗಿ ಮುಂದುದೋರಿದ
ಕಾರಣ ನಿಮ್ಮಿಂದ
ನಿಮ್ಮನರಿದೆನಯ್ಯಾ ಪ್ರಭುವೆ.
ಸಂಸಾರವೆಂಬ ಹಗೆಯಯ್ಯಾ
ತಂದೆ
ಎನ್ನ ವಂಶವಂಶ ತಪ್ಪದೆ ಅರಸಿಕೊಂಡು
ಬರುತ್ತಿದೆಯಯ್ಯಾ
ಎನ್ನುವನರಸಿಯರಸಿ ಹಿಡಿದು
ಕೊಳ್ಳುತ್ತಿದೆಯಯ್ಯಾ
ನಿಮ್ಮ ಮರಮೊಕ್ಕೆ ಕಾಯಯ್ಯಾ
ಎನ್ನ ಬಿನ್ನಪವನವಧಾರು
ಚೆನ್ನಮಲ್ಲಿಕಾರ್ಜುನ.
ಪೃತ್ವಿಯ ಗೆಲಿದ ಏಲೇಶ್ವರರ್ನ ನಾನು
ಕಂಡೆ
ಭವಭ್ರಮೆಯ ಗೆಲದ ಬ್ರಹ್ಮಶ್ವರನ
ನಾನು ಕಂಡೆ
ಸತ್ವ ರಾಜ ತಮ ತಾವಿದವ ಗೆಲಿದ
ತ್ರಿಪುರಾಂತಕನ ಕಂಡೆ
ಅಂತರಜ್ಞ ಆತ್ಮಘ್ಯನದಿಂದ
ಜ್ಯೋತಿಸಿದ್ದಯ್ಯನ ನಾನು ಕಂಡೆ ಇವರೆಲ್ಲರ ಮಾಧ್ಯಮ ಸ್ಥಾನ
ಪ್ರಸಾದ ಬಿದ್ದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ.
Akkamahadevi Vachanagalu in Kannada
ಪಚ್ಚೆಯ ನೆಲಗಟ್ಟು ಕಣಕದ ತೋರಣ
ವಜ್ರದ ಕಮ್ಬ
ಪವಳದ ಚಪ್ಪರವಿಕ್ಕಿ ಮದುವೆದು
ಮಾಡಿದರು
ನಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈದರ ಗಟ್ಟಿ ಸ್ಥಿರ ಸೇಸೆಯನಿಟ್ಟು
ಚೆನ್ನಮಲ್ಲಿಕಾರ್ಜುನನೆಂಬ
ಗಂಡಂಗೆನ್ನ ಮದುವೆಯ ಮಾಡಿದರು.
ಎನ್ನಂತೆ ಪುಣ್ಯನಗೆಯ್ದವರುಂಟೆ
ಎನ್ನಂತೆ ಭಾಗ್ಯಾಂಗೇಯ್ದವರುಂಟೆ
ಕಿನ್ನರನಂತಪ್ಪ
ಸೋದರನೆನಗೆ !
ಏಳೇಳು ಜನ್ಮದಲ್ಲಿ
ಶಿವಭಕ್ತರೆ ಬಂಧುಬಳಗೆನಗೆ
ಚನ್ನಮಲ್ಲಿಕಾರ್ಜುನನಂತಪ್ಪ
ಗಣದ ನೋಡಾ ಎನಗ .
ನಮಗೆ ನಮ್ಮ
ಲಿಂಗದ ಚಿಂತೆ
ನಮಗೆ ನಿಮ್ಮ
ಭಕ್ತರ ಚಿಂತೆ
ನಮಗೆ ನಮ್ಮ
ಚೆನ್ನಮಲ್ಲಿಕಾರ್ಜುನನಯ್ಯನ
ಚಿಂತೆಯಲ್ಲದೆ
ಲೋಕದ ಮಾತು ನಮಗೇತಕಣ್ಣ.
ಹಾಲು ತುಪ್ಪವ
ನುಂಗಿ ಬೇರಾಗಬಲ್ಲುದೆ
ಸೂರ್ಯಕಾಂತಿಯಲ್ಲಿದ್ದಗ್ನಿಯ
ನಾರುಬಲ್ಲರು
ಅಪಾರ ಮಹಿಮೆ
ಚೆನ್ನಮಲ್ಲಿಕಾರ್ಜುನ
ನಿನ್ನೆನ್ನೋಳಗಿರ್ದ ಪರಿಯ ಬೇರಿಲ್ಲದೆ
ಕಂಡು ಕಣ್ತೆರೆದೆನು.
ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮೌನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿ೦ಗೆ ವೆಂಗೊಳನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ
ನೀನೊಡ್ಡಿದ ಮಾಯೆಯನ್ನಾದರೂ ಗೆಲಬಾರದು.
Akkamahadevi Vachanagalu in Kannada
ಅಕ್ಕಮಹಾದೇವಿಯವರು ಹಲವು ವಚನಗಳನ್ನ ಹೇಳಿದ್ದಾರೆ ಅವುಗಳಲ್ಲಿ ಅತಿ ಉಪಯುಕ್ತವಾದವು ಈ ಕೆಳಗಿನಂತಿವೆ ಮಹಿಳಾ ಕವಿಯಾಗಿದ್ದ ಅಕ್ಕಮಹಾದೇವಿಯವರು ಚಿಕ್ಕವಯಸ್ಸಿನಲ್ಲೇ ತುಂಬಾ ಜ್ಞಾನವಂತರಾಗಿದ್ದರು ಸಮಾಜದಲ್ಲಿ ನಡೆಯುತ್ತಿರುವ ಹಲವು ಮೂಢನಂಬಿಕೆಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಜನರಿಗೆ ಮಾಹಿತಿ ತಿಳಿಸಿ ಅವುಗಳಿಂದ ಹೇಗೆ ಹೊರಬರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನ ನೀಡಿದ್ದರು ಪ್ರತಿ ಗುರುಗಳನ್ನ ತಲುಪಿ ಜನರಿಗೆ ಅರಿವು ಮೂಡಿಸಬೇಕು ಎಂಬುದು ಅಕ್ಕಮಹಾದೇವಿಯವರ ಆಲೋಚನೆಯಾಗಿದ್ದು ಹಾಗಾಗಿ ದೇಶ ಸಂಚಾರ ತಮ್ಮ ಗುರಿಯಾಗಿಸಿಕೊಂಡು ತಮ್ಮ Akkamahadevi Vachanagalu in Kannada ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದರು.
ಅಕ್ಕ ಕೆಳಕ್ಕಾ ನಾನೊಂದು
ಕನಸ ಕಂಡೆ
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ
ಗೊರವನು
ಬಂದೆನ್ನ ನೆರೆದ ನೋಡವ್ವಾ
ಆತನನಪ್ಪಿಕೊಂಡು ತಳವೆಳಗಾದೆನು
ಚೆನ್ನಮಲ್ಲಿಕಾರ್ಜುನನ ಕಂಡು
ಕಣ್ಣ ಮುಚ್ಚಿ ತೆರೆದು ತಳವಳಗಾದೆನು.
ಶಿವನೇ ಉಳಿವ ಕರೆವ
ನೇಹಮಂಟೆ
ಸಂಸಾರಕ್ಕಂ ನಿಮ್ಮಲ್ಲಿ
ಗೆಡೆಯಾಡುವ
ಭಕ್ತಿಯುಂಟೆ ?
ಏನಯ್ಯಾ ಶಿವನೇ
ಏನೆಂದು ಪೇಳ್ವೆ ಲಜ್ಜೆಯ
ಮಾತಾ ಚೆನ್ನಮಲ್ಲಿಕಾರ್ಜುನ.
ಆಸನದಿಂದ ಕುದಿದು ,
ವೈಸನದಿಂದ ಬೆಂದು
ಅತಿ ಆಸೆಯಿಂದ ಬಳಲಿ
ವಿಷಯಕ್ಕೆ ಹರಿವ ಜೀವಿಗಳು
ನಿಮ್ಮನರಿಯರು
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ ನಿಮ್ಮನೆತ್ತ ಬಲ್ಲರಯ್ಯ
ಚೆನ್ನಮಲ್ಲಿಕಾರ್ಜುನ.
ಅಳೀಸಂಕುಲವೇ
ಮಾಮರವೇ ,ಬೆಳದಿಂಗಳೇ
ಕೋಗಿಲೆಯ
ನಿಮ್ಮನೆಲ್ಲರನ್ನು
ಒಂದ ಬೇಡುವೆನು
ಎನ್ನೊಡೆಯ
ಚನ್ನಮಲ್ಲಿಕಾರ್ಜುನದೇವ
ಕಂಡೆಡೆ ಕರೆದು ತೋರಿರೆ.
ಅಕ್ಕಮಹಾದೇವಿ ವಚನಗಳ ಸಂಗ್ರಹ
ಅಯ್ಯ ಪಾತಾಳವಿತ್ತಿತ್ತು
ಶ್ರೀಪಾದವೆತ್ತೆತ್ತ
ಬ್ರಹ್ಮಾ೦ಡವಿತ್ತೆತ್ತೆ ಮಣಿಮುಕುಟವಿತ್ತೆತ್ತ
ಅಯ್ಯ ದಶ ದಿಕ್ಕು ಇತ್ತಿತ್ತೇ
ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ
ನೀವೆನ್ನ ಕರಸ್ಥಲಕ್ಕೆ ಬಂದು
ಚುಳುಕಾದಿರಯ್ಯಾ.
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಬತ್ತು ನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ
ಭವಗಳ ನುಂಡೆ ನುಂಡೆ
ಸುಖಾಸುಖಂಗಳ
ಹಿಂದಣ ಜನ್ಮ೦ಗಳು ತಾನೇನಾದರಾಗಲಿ
ಇಂದು ನೀ ಕರುಣಿಸು
ಚೆನ್ನಮಲ್ಲಿಕಾರ್ಜುನ.
ಭವಭವದಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ
ಹುಕಿದೊಂದೊಡೆ ಉಂಟು ಹಸಿವಾಯಿತ್ತು
ಇಂದು ನೀನೊಲಿದೆಯಾಗಿ
ಎನಗೆ ಅಮೃತದ ಅಪಾಯವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯ ನಿಮ್ಮ
ಮೆಟ್ಟಿದೆನಾದೊಡೆ
ಆನೆ ನಿಮ್ಮಾಣೆ ಚನ್ನಮಲ್ಲಿಕಾರ್ಜುನ.
ಕಾಮಬಲ್ಲದನೆಂದರೆ
ಉರುಹಿ ಭಸ್ಮವ ಮಡಿದ
ಕಾಲ ಬಲ್ಲದನೆಂದರೆ ಕೆಡಹಿ ತುಳಿದ !
ಬ್ರಹ್ಮ ಬಲ್ಲದೆನೆಂದರೆ
ಶಿರವ ಚಿವುಟಿಯಾಡಿದ !
ಎಲೆ ಅವ್ವ , ನೀನು ಕೇಳಾ ತಾಯ
ವಿಷ್ಣು ಬಲ್ಲದನೆಂದರೆ
ಮುರಿದು ಕಂಕಾಳವ ಪಿಡಿದ !
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದೆನವ್ವ
ಇದು ಕಾರಣ
ಚನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನ ಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ .
ಆಯುಷ್ಯ ಹೋಗುತ್ತಿದೆ ,ಭವಿಷ್ಯ ತೊಲಗುತ್ತಿದೆ
ಕುಡಿರ್ದ ಸತಿಸುತರು , ತಮತಮಗೆ ಹರಿದು
ಹೋಗುತ್ತಿದ್ದರೆ ಬೇಡ ಬೇಡವೇಲೇ
ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೇ
ಚೆನ್ನಮಲ್ಲಿಕಾರ್ಜುನನ ಶರಣರ
ಸಂಗದಲ್ಲಿ ಹೊಣೆ ಹೊಕ್ಕು
ಬದುಕು ಕಂಡಾ ಮನವೇ.
Akkamahadevi Vachanagalu in Kannada with Meaning
ಅಕ್ಕಮಹಾದೇವಿಯವರ ವಚನಗಳು ಯಾರೆಲ್ಲಾ ಅದೇನ ಮಾಡಿದ್ದಾರೆ ಅವರಿಗೆ ತಿಳಿಯುವ ವಿಷಯವೇನೆಂದರೆ ತುಂಬಾ ಸುಲಭವಾಗಿ ಅರ್ಥವಾಗುವಂತಹ ವಿಚಾರಗಳನ್ನ ಈಕೆ ತಮ್ಮದೇ ಆದ ವಾಕ್ಯಗಳಲ್ಲಿ ಜನರಿಗೆ ತಿಳಿಸಲು ಬಯಸುತ್ತಿದ್ದರು ಕೆಲವೇ ಕಾಲುಗಳನ್ನ ಓದಿ ಜೀವನ ಏನೆಂಬುದು ಅರ್ಥವಾಗುವ ರೀತಿಯಲ್ಲಿ ಈಕೆ ಹಲವು ಸಾಹಿತ್ಯಗಳನ್ನ ರಚಿಸಿದ್ದಾರೆ, ಕನ್ನಡದಲ್ಲಿ ಮೊಟ್ಟಮೊದಲ ಕವಿಯತ್ರಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತನ್ನದೇ ಆದ ಸಾಹಿತ್ಯದ ಮೂಲಕ ಹೇಗೆ ಇದ್ದಬೇಕು ಎಂಬುದನ್ನು ಪರಿಚಯಿಸಿದ ಮಹಾನ್ ಮಹಿಳೆ ಇವರಾಗಿದ್ದಾರೆ ಈ ಕಾರಣಕ್ಕಾಗಿಯೇ ಇವರ ದೇವಾಲಯಗಳನ್ನ ಶಿವಮೊಗ್ಗದ ಹಲವು ಹಳ್ಳಿಗಳಲ್ಲಿ ಈಗ ಸಹ ಕಾಣಬಹುದಾಗಿದೆ.
ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು
ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ
ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ
ಕಿಚ್ಚಿನೊಳಗೆ ಬಿದ್ದ ಕಿಡೆಯಂತಪ್ಪುದಯ್ಯ
ಸುಚಿತ್ತದಿಂದ ನಿಮ್ಮ ಸದ್ಭಕ್ತರ
ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ
ಸಾರುವೆನು ಹೇಳ ಚೆನ್ನಮಲ್ಲಿಕಾರ್ಜುನ ?
ಎನಗೇಕಯ್ಯ ನಾ ಪ್ರಪಂಚಿತ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಜಡೆಯಲ್ಲಿ , ಒಸರುವ ನೆಲೆವನೆಗೇಕಯ್ಯಾ ?
ಬೆರಳು ತಾಳೆಹಣ್ಣ ಹಿಸುಕಿದೆಡೆ ಮೇಲಲುಂಟೆ
ಬಿತ್ತೆಲ್ಲಾ ಜೀವ ಅದರೊಪ್ಪದ ತೇರ ಎನಗೆ
ಎನ್ನ ತಪ್ಪನೊಪ್ಪಗೊಳ್ಳಿ ಚೆನ್ನಮಲ್ಲಿಕಾರ್ಜುನ
ದೇವರ ದೇವಾ ನೈನ್ ಅಣ್ಣಗಳಿರಾ.